
ಸ್ವದೇಶಿ ವಿಜ್ಞಾನ ಆಂದೋಳನ ಕರ್ನಾಟಕ (ಸ್ವವಿಆಕ) ಭಾರತೀಯ ವೈಜ್ಞಾನಿಕ ಕೊಡುಗೆಗಳ ಬಗ್ಗೆ ಅಪಾರ ಹೆಮ್ಮೆ ಹಾಗೂ ಆಸಕ್ತಿ ಹೊಂದಿರುವ ಲಾಭರಹಿತ ಸಂಸ್ಥೆ. ಭಾರತೀಯ ಭಾಷೆಗಳಲ್ಲಿ ವಿಜ್ಞಾನ, ತಂತ್ರಜ್ಞಾನಗಳ ಬೆಳವಣಿಗೆಯ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿರುವ ಕ್ರಿಯಾತ್ಮಕ ಸಂಸ್ಥೆ ಇದಾಗಿದ್ದು, ಭಾರತೀಯ ವೈಜ್ಞಾನಿಕ ಪರಂಪರೆಯನ್ನು ಮರೆಯದೆ, ನಾಡಿನ ಜನಮನದಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.
ಸ್ವದೇಶಿ ವಿಜ್ಞಾನ ಆಂದೋಳನ ಕರ್ನಾಟಕವು “ವಿಜ್ಞಾನ ಭಾರತಿಯ” ಕರ್ನಾಟಕ ಘಟಕ. ವಿಜ್ಞಾನ ಭಾರತಿಯು ದೇಶದ ಅತಿದೊಡ್ಡ ಜನಪ್ರಿಯ ಹಾಗೂ ವೃತ್ತಿಪರ ವಿಜ್ಞಾನ ಚಳುವಳಿಯಾಗಿದ್ದು, ದೇಶದಲ್ಲಿ ಅತಿಹೆಚ್ಚು ಸ್ವತಂತ್ರ ರಾಜ್ಯ ಘಟಕಗಳನ್ನು ಹೊಂದಿದೆ. ಸ್ವವಿಆಕ ವಿಜ್ಞಾನ ಭಾರತಿಯ ಮಾದರಿ ರಾಜ್ಯ ಘಟಕವಾಗಿ ಹಲವು ಆಯಾಮಗಳಲ್ಲಿ ಬೆಳೆಯುತ್ತಿದೆ. ಅವುಗಳಲ್ಲಿ ಪ್ರಮುಖವಾದವು (ಅ) ರಾಜ್ಯದಾದ್ಯಂತ ಜಿಲ್ಲಾ ಘಟಕಗಳ ಮೂಲಕ ಅತಿ ಹೆಚ್ಚು ಜನರನ್ನು ತಲುಪುವುದು; (ಆ) ಆಜೀವ ಸದಸ್ಯರಾಗಿ ಹಾಗೂ ಪದಾಧಿಕಾರಿಗಳಾಗಿ ಮಹಿಳೆಯರ ಹಿರಿದಾದ ಪಾತ್ರ, (ಇ) ವಿವಿಧ ಕ್ಷೇತ್ರಗಳಲ್ಲಿ ಬಹುಮುಖಿ ಕಾರ್ಯಚಟುವಟಿಕೆಗಳನ್ನು ಶಿಕ್ಷಕರು ಹಾಗೂ ವಿಜ್ಞಾನಿಗಳ ನೇತೃತ್ವದಲ್ಲಿ ನಡೆಸಿಕೊಂಡುಬರುವುದು.
ನಮ್ಮ ಪಾರಂಪರಿಕ ಸ್ವದೇಶಿ ವಿಜ್ಞಾನಗಳಾದ ಆಯುರ್ವೇದ, ಯುನಾನಿ, ಸಿದ್ಧ, ಯೋಗ, ವಾಸ್ತು ವಿದ್ಯೆ ಇವುಗಳನ್ನು ಪ್ರೋತ್ಸಾಹಿಸುವುದಷ್ಟೇ ಅಲ್ಲದೆ, ಎಲ್ಲಾ ಸಮಕಾಲೀನ ವೈಜ್ಞಾನಿಕ ಕ್ಷೇತ್ರಗಳನ್ನೂ ಭಾರತೀಯ ಭಾಷೆಗಳಲ್ಲಿ, ಪ್ರಮುಖವಾಗಿ ಕನ್ನಡದಲ್ಲಿ ಬೆಳೆಸುವ ಕೆಲಸದಲ್ಲಿ ಸಂಸ್ಥೆ ತೊಡಗಿಕೊಂಡಿದೆ. ಸ್ವದೇಶಿ ಆದರ್ಶದಂತೆ ಸಮಗ್ರತಾ ದೃಷ್ಟಿಯಲ್ಲಿ ನಮ್ಮ ಸಂಸ್ಥೆಯು ಆಧುನಿಕ ವಿಜ್ಞಾನವನ್ನು ಜನಕಲ್ಯಾಣ ಹಾಗೂ ಪರಿಸರಕಲ್ಯಾಣಕ್ಕಾಗಿ ಬಳಸಲು ಕಂಕಣಬದ್ಧವಾಗಿದೆ.
ಸ್ವವಿಆಕ ಸೆಪ್ಟೆಂಬರ್ ೧೫, ೨೦೦೪ ನೇ ಇಸವಿಯಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರ ಜನ್ಮ ವಾರ್ಷಿಕೋತ್ಸವದಂದು ೧೪ ಸ್ಥಾಪಕ ಸದಸ್ಯರಿಂದ ಪ್ರಾರಂಭವಾಯಿತು. ಈಗ ನಾವು ೨೫ ಜಿಲ್ಲಾ ಘಟಗಕಗಳನ್ನು ಹೊಂದಿದ್ದು ೧೦೦೦ ಕ್ಕೂ ಮಿಗಿಲಾಗಿ ಆಜೀವ ಸದಸ್ಯರನ್ನು ಕರ್ನಾಟಕದಾದ್ಯಂತ ಹೊಂದಿದ್ದೇವೆ. ನಮ್ಮ ಸದಸ್ಯರಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ರೈತರು, ವೃತ್ತಿಪರರು, ಹೀಗೇ ವಿವಿಧ ಕ್ಷೇತ್ರಗಳಿಂದ ಬಂದವರಿದ್ದಾರೆ. ಮುಖ್ಯವಾಗಿ, ಕರ್ನಾಟಕದ ವಿವಿಧ ವಿಶ್ವ ವಿದ್ಯಾಲಯಗಳಿಂದ ಸದಸ್ಯರಾಗಿರುವ ಶಿಕ್ಷಕರು, ಉಪಕುಲಪತಿಗಳು, ಹಾಗೂ ಹಲವಾರು ಸಂಶೋಧನಾ ಸಂಸ್ಥೆಗಳಿಂದ ಸದಸ್ಯರಾಗಿರುವ ವಿಜ್ಞಾನಿಗಳು ಹಾಗೂ ನಿರ್ದೇಶಕರು ನಮ್ಮ ಕಾರ್ಯಚಟುವಟಿಕೆಗಳಿಗೆ ಬೆನ್ನೆಲುಬಾಗಿದ್ದಾರೆ.
ಕಾರ್ಯಕಾರೀ ಸಮಿತಿ ಸದಸ್ಯರು

ಪ್ರೊ. ಕೆ ಐ ವಾಸು
ಸ್ಥಾಪಕರು, ಪೋಷಕರು
ಮಾಜಿ ನಿರ್ದೇಶಕರು, ಸಿಎಸ್ಐಆರ್ – ಸಿಇಆರ್ ಐ, ಕಾರೈಕುಡಿ, ಮಾಜಿ ಪರ ಉಪಕುಲಪತಿಗಳು, ಕೊಚ್ಚಿ ವಿಶ್ವವಿದ್ಯಾಲಯ, ನಿವೃತ್ತ ಪ್ರಾಚಾರ್ಯರು, ಐ ಐ ಎಸ್ ಸಿ, ಬೆಂಗಳೂರು

ಕ್ಯಾಪ್ಟೆನ್ ಗಣೇಶ್ ಕಾರ್ಣಿಕ್
ಅಧ್ಯಕ್ಷರು
ನಿವೃತ್ತ ಭಾರತೀಯ ಸೇನಾ ನಾಯಕರು
ಮಾಜಿ ಎಂ ಎಲ್ ಸಿ, ಕರ್ನಾಟಕ

ಡಾ. ಸಿ ರೇಣುಕಾಪ್ರಸಾದ್
ಕಾರ್ಯಕಾರೀ ಅಧ್ಯಕ್ಷರು
ಮಾಜಿ ಉಪಕುಲಪತಿಗಳು
ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ

ಶ್ರೀ. ರಮೇಶ್ ಎಚ್
ಸ್ಥಾಪಕರು ಮತ್ತು ಪ್ರಧಾನ ಕಾರ್ಯದರ್ಶಿ
ಪ್ರಾಂಶುಪಾಲರು, ಗುರುನಾರಾಯಣ ವಿದ್ಯಾವಿಹಾರ, ಬೆಂಗಳೂರು

ಡಾ. ಕೆ ವೈ ಕೋಟಿಕಲ್
ಉಪಾಧ್ಯಕ್ಷರು
ಸಂಶೋಧನಾ ನಿರ್ದೇಶಕರು
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ

ಡಾ. ಎ ಎಮ್ ಸುಧಾಕರ
ಉಪಾಧ್ಯಕ್ಷರು
ಮಾಜಿ ಅಧ್ಯಕ್ಷರು, ಮೈಸೂರು ವಿವಿ ಗಣಕ ಕೇಂದ್ರ
ನಿವೃತ್ತ ನಿರ್ದೇಶಕರು, ಸಿ ಐ ಎಸ್ ಟಿ, ಮೈಸೂರು ವಿವಿ

ಡಾ. ನಿರಂಜನ ಪ್ರಭು
ಉಪಾಧ್ಯಕ್ಷರು
ವಿಭಾಗಾಧ್ಯಕ್ಷರು, ಸಹಾಯಕ ಪ್ರಾಚಾರ್ಯರು
ರಸಾಯನ ಶಾಸ್ತ್ರ ವಿಭಾಗ
ರಾಮಯ್ಯ ಆನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು

ಡಾ. ವಿ ಶುಭ
ಉಪಾಧ್ಯಕ್ಷರು
ವಿಜ್ಞಾನಿ, ನಿರ್ದೇಶಕ ದರ್ಜೆ, ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಾಲಯ, ಬೆಂಗಳೂರು

ಡಾ. ವೈ ಎಸ್ ಗಾಯತ್ರಿ
ಸ್ಥಾಪಕರು ಹಾಗೂ ಖಜಾಂಚಿ
ನಿವೃತ್ತ ಉಪನ್ಯಾಸಕರು, ಬಾಲಾಜಿ ಪದವಿಪೂರ್ವ ಕಾಲೇಜು, ಬೆಂಗಳೂರು

ಶ್ರೀ ಎಚ್ ಕೆ ಗೋವಿಂದಯ್ಯ
ಸಂಘಟನಾ ಕಾರ್ಯದರ್ಶಿ
ದೈಹಿಕ ಶಿಕ್ಷಣ ಬೋಧಕರು, ಶೇಷಾದ್ರಿಪುರಂ ಕಾಂಪೋಸಿಟ್ ಕಾಲೇಜು, ಬೆಂಗಳೂರು

ಶ್ರೀಮತಿ ಎಮ್ ಎನ್ ಶೈಲಜ
ಸ್ಧಾಪಕರು ಹಾಗೂ ಸದಸ್ಯರು
ನಿವೃತ್ತ ಅಧ್ಯಾಪಕರು, ಎಂ ಇ ಎಸ್ ಕಾಲೇಜು, ಬೆಂಗಳೂರು

ಡಾ. ವಿ ಗಿರೀಶ್ ಕುಮಾರ್
ಸದಸ್ಯರು ಮತ್ತು ಸಂಯೋಜಕರು, ಧನ್ವಂತರೀ ವೇದಿಕೆ
ಸಹಾಯಕ ಪ್ರಾಧ್ಯಾಪಕರು, ಟಿ ಡಿ ಯು, ಬೆಂಗಳೂರು

ನಮ್ಮ ವಿವಿಧ ಗುಂಪುಗಳ ಸಂಯೋಜಕರು, ಮಾಜಿ ಅಧ್ಯಕ್ಷರು ಹಾಗೂ ಸ್ಥಾಪಕ ಸದಸ್ಯರ ಪರಿಚಯವನ್ನು ಇಲ್ಲಿ ಪಡೆಯಬಹುದು.
ನಮ್ಮ ಜಿಲ್ಲಾ ಸಮಿತಿ ಸದಸ್ಯರು ಹಾಗೂ ವಿವಿಧ ಗುಂಪುಗಳ ಸದಸ್ಯರ ಪರಿಚಯ ಹಾಗೂ ಸಂಪರ್ಕವನ್ನು ನೀವು ಇಲ್ಲಿ ಪಡೆಯಬಹುದು.



